Sunday, March 28, 2010

ಇಂಟರ್‌ನೆಟ್ ಮೂಲಭೂತ ಹಕ್ಕು


ಭಾರತ ಸೇರಿದಂತೆ ವಿಶ್ವದ 26 ದೇಶಗಳಲ್ಲಿನ ಇಂಟರ್‌ನೆಟ್ ಬಳಸುವ ಪ್ರತಿ ಐದು ಮಂದಿಯಲ್ಲಿ ನಾಲ್ವರು, ಇಂಟರ್‌ನೆಟ್ ಸೌಲಭ್ಯ ಹೊಂದುವುದು ಮತ್ತು ಬಳಸುವುದು ‘ಮೂಲಭೂತ ಹಕ್ಕು’ ಎಂದು ಪ್ರತಿಪಾದಿಸಿದ್ದಾರೆ.
27 ಸಾವಿರ ವಯಸ್ಕರು ಪಾಲ್ಗೊಂಡಿದ್ದ ಸಮೀಕ್ಷೆಯಲ್ಲಿ ಈ ಸಂಗತಿ ತಿಳಿದು ಬಂದಿದೆ. ಸಂವಹನದ ಹಕ್ಕನ್ನು ಯಾರೊಬ್ಬರೂ ನಿರ್ಲಕ್ಷಿಸುವಂತಿಲ್ಲ. ತಿಳಿವಳಿಕೆ ಹೆಚ್ಚಿಸುವಲ್ಲಿ ಮತ್ತು ಜ್ಞಾನ ಪ್ರಧಾನವಾದ ಮಾಹಿತಿ ಆಧಾರಿತ ಸಮುದಾಯದ ಬೆಳವಣಿಗೆಯಲ್ಲಿ ಇಂಟರ್‌ನೆಟ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಬಿಬಿಸಿ ವರ್ಲ್ಡ್ ಸರ್ವಿಸ್‌ಗೆ ಗ್ಲೋಬ್‌ಸ್ಕ್ಯಾನ್ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಸಮೀಕ್ಷೆಯಲ್ಲಿ ಭಾಗಿಯಾದ ಶೇ 87ರಷ್ಟು ಜನರು, ಇಂಟರ್‌ನೆಟ್ ಸೌಲಭ್ಯ ಒದಗಿಸುವುದು ಎಲ್ಲರ ಮೂಲಭೂತ ಹಕ್ಕು ಆಗಿದೆ ಎಂದು ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಮೆಕ್ಸಿಕೊ, ಬ್ರೆಜಿಲ್ ಮತ್ತು ಟರ್ಕಿ ದೇಶಗಳು ಈ ಆಲೋಚನೆಯನ್ನು ಬಲವಾಗಿ ಪ್ರತಿಪಾದಿಸಿವೆ.

No comments: